ಕಾವ್ಯ ಸಂಗಾತಿ
ನಿಷ್ಟೆ
ಅಭಿಜ್ಞಾ ಪಿ.ಎಮ್.ಗೌಡ
ಪ್ರತಿಷ್ಟೆಯಿಲ್ಲದ ನಿಷ್ಟೆಯಲಿ
ಸ್ವಾಮಿಭಕ್ತಿಯ ಪರಾಕಾಷ್ಟೆ
ಇದಲ್ಲವೇ ದೈವಭಕ್ತಿ.?
ತೋರಿದೆ ಅವಿನಾಭಾವ ಯುಕ್ತಿ
ಗುರು ಶಿಷ್ಯರ ಪ್ರೀತಿಯಲಿ
ಬಿತ್ತರಿಸಿದೆ ಬಾಂಧವ್ಯದ ಶಕ್ತಿ..!!
ನಂದಿ ಶಿವನ ಬಂಧ
ಆತ್ಮಾಲಿಂಗನದ ಅನುಬಂಧ….
ಪ್ರಾಮಾಣಿಕತೆಯ ಗಂಧ
ಕಣಕಣದಲೂ ಬಲುಚಂದ….
ಶಿವನಷ್ಟೆ ಪೂಜೆ ನೈವೇದ್ಯದ ಪಾಲು
ಸರಿಸಮನೆ ನಂದಿ.?
ಸ್ವಾರ್ಥವಿಲ್ಲದ ನಿಸ್ವಾರ್ಥದಲಿ
ನಿರ್ಬಂಧಿ ಈ ನಂದಿ
ಶಿವಾಲಯದ ಎದುರೆ ಕುಳಿತು
ಮೊದಲ ಪೂಜೆ ಪಡೆವ ಸುಗಂಧಿ..!!
ಲಯಕಾರಕ ಶಿವರುದ್ರನ
ಪ್ರೀತಿಪಾತ್ರ ವೃಷಭ
ಭೂತಗಣನಾಯಕನ
ನಿಷ್ಟದಾತ ನಿಸ್ವಾರ್ಥ ನಂದಿ…..
ಪ್ರಾಮಾಣಿಕತೆಯ ಮೇರು
ಸತ್ಯ ನಿಷ್ಟೆಗಳ ಬೇರು
ಗುರುವಿನ ಗುಲಾಮನಿವ
ಶಿವಭಕ್ತನ ಸಹನೆಯ ತೇರು
ಬಲುಜೋರು ಜೋರು…..
ದೇವನ ಪಾದಸೇವೆ ಅದೆಷ್ಟು
ಅಧಮ್ಯದ ಸುಗಂಧ.!
ಈಗೇಕೆ ಕಳಚುತಿದೆ
ಗುರು ಶಿಷ್ಯರ ಬಂಧುರದ ಬಂಧ.?
ಮನುಜನ ಸ್ವಾರ್ಥ ನೋಡಿ
ನಿಷ್ಟೆಯೆ ನಾಚಿ ನೀರಾಗಿದೆ
ನಾನು ಅದೆಷ್ಟು ನಿಷ್ಟನೆಂದು..!!
ನುಡಿಯಲ್ಲಿ ಸಲ್ಲದು ನಿಷ್ಟೆ
ಕೃತಿಯಲ್ಲಿ ತೋರುವುದೆ ಪರಾಕಾಷ್ಟೆ
ಪರರ ಹೊಗಳಿಕೆ ತೆಗಳಿಕೆಗಳಿಗೆ
ಬೀಗುವುದಷ್ಟೆಯಲ್ಲ
ಮನ ಸಂತೈಸಿ ನಡೆಯುವುದೆ ನಿಷ್ಟೆ…!!!]
ಗುರು ಶಿಷ್ಯರ ಭಾಂದವ್ಯ ಕುರಿತ
ಸೊಗಸಾದ ಭಕ್ತಿಪ್ರಧಾನ ಗೀತೆ
ಮೇಡಮ್ . ಚಂದವಿದೆ.
ಧನ್ಯವಾದಗಳು ಮೇಡಮ್